Lord Ganesha Quotes in Kannada | ಗಣೇಶ ಕವನಗಳು

ನಿನ್ನ ನೋಡಿದ ಕ್ಷಣವೇ ನಾ ಪಾವನನಾದೆ
ನಿನ್ನ ದರುಶನ ಪಡೆದು ನಾ ಧನ್ಯನಾದೆ…
Ninna Nodida Kshanave Naa Paavananaade
Ninna Darushana Padedu Naa Dhanyanaade…

ಪ್ರತಿಕ್ಷಣ ನಿನದೇ ಧ್ಯಾನ
ಪ್ರತಿಕ್ಷಣ ನಿನದೇ ನಾಮ
ಪ್ರತಿಕ್ಷಣ ನಿನದೇ ಸ್ಮರಣೆ
ಪ್ರತಿಕ್ಷಣ ನಿನದೇ ಬಿಂಬ…
Pratikshana Ninade Dhyana
Pratikshana Ninade Naama
Pratikshana Ninade Smarane
Pratikshana Ninade Bimba…

ನಂಬಿರುವೆ ನಿನ್ನನ್ನೇ
ಸೋತಿರುವೆ ನಿನ್ನನ್ನೇ
ನೆನೆದಿರುವೆ ನಿನ್ನನ್ನೇ
ಕರೆದಿರುವೆ ನಿನ್ನನ್ನೇ…
Nambiruve Ninnanne
Sotiruve Ninnanne
Nenediruve Ninnanne
Karediruve Ninnanne…

ಇದನ್ನೂ ಓದಿ: Shiva Quotes in Kannada | Shiva Kavana

ನನ್ನ ಜೀವವು ನೀನೆ
ನನಗೆ ಸಿಕ್ಕ ಗೆಲುವು ನೀನೇ…
Nanna Jeevavu Neene
Nanage Sikka Geluvu Neene…

ಮನಸಲ್ಲೂ ನೀನೇ, ಕನಸಲ್ಲೂ ನೀನೇ
ದಿನವೂ ನೀನೇ, ರಾತ್ರಿಯೂ ನೀನೇ
ಉಸಿರು ನೀನೇ, ಪ್ರಾಣವು ನೀನೇ…
Manasallu Neene, Kanasallu Neene
Dinavu Neene, Raatriyu Neene
Usiru Neene, Pranavu Neene…

ಉತ್ತಮನು ನೀನು
ಬುದ್ಧಿಯಲ್ಲಿ ಅತ್ಯುತ್ತಮನು ನೀನು
ಶ್ರೇಷ್ಠರಲ್ಲಿ ಶ್ರೇಷ್ಠನು ನೀನು
ವಿಘ್ನ ವಿನಾಶಕನು ನೀನು…
Uttamanu Neenu
Buddhiyalli Atyuttamanu Neenu
Shrestharalli Sreshthanu Neenu
Vigna Vinashakanu Neenu…

ಇದನ್ನೂ ಓದಿ: Lord Krishna Quotes in Kannada

ವಿದ್ಯೇ ಕೊಡುವವನು ನೀನೇ
ಬುದ್ಧಿ ಕೊಡುವವನು ನೀನೇ
ಏರಿಸುವವನು ನೀನೇ
ಬೀಳಿಸುವವನು ನೀನೇ…
Vidye Koduvavanu Neene
Buddhi Koduvavanu Neene
Erisuvavanu Neene
Bilisuvavanu Neene…

ನಿನ್ನ ನಂಬಿದರೆ ಸೋಲಿಲ್ಲ
ಗಣಪ ನೀನೆ ನನ್ನ ನರನಾಡಿಯಲ್ಲೆಲ್ಲ…
Ninna Nambidare Solilla
Ganapa Neene Nanna Naranaadiyallella…

ಗಣಪತಿಯೇ ನನಗೆ ವಿದ್ಯೇ ಕೊಡು
ಗುರಿ ಮುಟ್ಟುವ ತನಕ ನನ್ನ ಜೊತೆ ನಿಲ್ಲು…
Ganapatiye Nanage Vidye Kodu
Guri Muttuva Tanaka Nanna Jote Nillu…

ಬಾನಲಿ ನಿನ್ನ ಬಿಂಬವ ಕಂಡೆ
ಗಣೇಶ ಎಲ್ಲೆಲ್ಲೂ ನಿನ್ನನ್ನೆ ಕಂಡೆ…
Baanali Ninna Bimbava Kande
Ganesha Ellellu Ninnanne Kande…

ಗಣೇಶನೇ ನೀ ಮಗುವಾಗಿ ಬಾ
ಸ್ನೇಹಿತನಾಗಿ ನೀ ಖುಷಿಯ ತಾ…
Ganeshane Nee Maguvaagi Baa
Snehitanaagi Nee Khushiya Taa…

ನೀ ನನ್ನ ಛಲವಾಗಿ ಬಾ
ಗಜಮುಖನೆ ನೀ ನನ್ನ ಗೆಲುವಾಗಿ ಬಾ
ನೀ ನನ್ನ ಗುರಿಯಾಗಿ ಬಾ
ಗಜಮುಖನೆ ನೀ ನನ್ನ ಗುರುವಾಗಿ ಬಾ…
Nee Nanna Chalavaagi Baa
Gajamukhane Nee Nanna Geluvaagi Baa
Nee Nanna Guriyaagi Baa
Gajamukhane Nee Nanna Guruvaagi Baa…

Leave a Comment